ರಾಷ್ಟ್ರ ಕವಿಕುವೆಂಪು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾದ ‘ಮಲೆಗಳಲ್ಲಿಮದುಮಗಳು’ ಕಾದಂಬರಿ ಮತ್ತೊಮ್ಮೆಇಂಗ್ಲಿಷ್ಗೆ ಅನುವಾದಗೊಂಡಿದೆ. ಈ ಬಾರಿ ಖ್ಯಾತ ಪ್ರಕಾಶನ ಸಂಸ್ಥೆಯಾದ ‘ಪೆಂಗ್ವಿನ್ರಾಂಡೋಕ್ಹೌಸ್ಇಂಡಿಯಾ’ ಪ್ರಕಟಿಸಿದ್ದು, ಸಾಹಿತಿ, ಪ್ರಾಧ್ಯಾಪಕಿ ವನಮಾಲಾ ವಿಶ್ವನಾಥ ಅವರು ಈ ಬೃಹತ್ಕಾದಂಬರಿಯನ್ನು‘ಬ್ರೈಡ್ಇನ್ದಿಹಿಲ್ಸ್’ (Bride in the Hills) ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್ಗೆ ಅನುವಾದಮಾಡಿದ್ದಾರೆ.
ಇಂಗ್ಲಿಷ್ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಅನುವಾದಕಿ ವನಮಾಲಾ ವಿಶ್ವನಾಥ ಅವರು ನಾಲ್ಕು ದಶಕಗಳಿಂದ ಬೆಂಗಳೂರಿನ ಗಣ್ಯ ಸಂಸ್ಥೆಗಳಲ್ಲಿ ಇಂಗ್ಲಿಷ್ಕಲಿಸಿದ್ದಾರೆ. ದ್ವಿಭಾಷಾವಿದ್ವಾಂಸರಾಗಿರುವ ಅವರುಕಥಾ, ಸಾಹಿತ್ಯಅಕಾಡೆಮಿಮತ್ತುರಾಷ್ಟ್ರೀಯ ಅನುವಾದ ಮಿಷನ್ನಸಹಯೋಗದೊಂದಿಗೆಇಂಗ್ಲಿಷ್ಭಾಷಾಂತರದಲ್ಲಿಭಾರತೀಯ ಸಾಹಿತ್ಯವನ್ನುಕಲಿಸಿದ್ದಾರೆ, ಪ್ರಕಟಿಸಿದ್ದಾರೆಮತ್ತುಪ್ರಚಾರ ಮಾಡಿದ್ದಾರೆ.
ಪ್ರಶಸ್ತಿ ವಿಜೇತ ಅನುವಾದಕಿ ಆಗಿರುವ ವನಮಾಲ ಅವರು ಆಧುನಿಕ ಕನ್ನಡ ಲೇಖಕರಾದ ತೇಜಸ್ವಿ (1994), ವೈದೇಹಿ (1998), ಸಾರಾ ಅಬೂಬಕರ್ (1999), ಯು.ಆರ್. ಅನಂತಮೂರ್ತಿ (2001), ಲಂಕೇಶ್ (2003), ಮತ್ತು ಗುಲ್ವಾಡಿ ವೆಂಕಟ ರಾವ್ (2019) ಅವರ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಅಷ್ಟೆ ಅಲ್ಲದೆ, ವಚನ (2012); ದಿ ಲೈಫ್ಆ ಫ್ಹರಿಶ್ಚಂದ್ರ(ಹಾರ್ವರ್ಡ್ಯೂನಿವರ್ಸಿಟಿ ಪ್ರೆಸ್,2017); ಮತ್ತು ವಡ್ಡಾ ರಾಧನೆಯನ್ನು ಕೂಡಾ ಅವರು ಅನುವಾದ ಮಾಡಿದ್ದಾರೆ. ಅಶೋಕ ವಿಶ್ವ ವಿದ್ಯಾನಿಲಯದಲ್ಲಿ ಭಾಷಾಂತರ ಫೆಲೋ ಆಗಿರುವ ಅವರು ಪ್ರಸ್ತುತ ಎಲ್. ತೋಲ್ಪಾಡಿಯವರ ಪ್ರಬಂಧ ಸಂಗ್ರಹ, ‘ಮ್ಯೂಸಿಂಗ್ಸ್ಆನ್ದಿಮಹಾಭಾರತ’ವನ್ನು ಅನುವಾದಿಸುತ್ತಿದ್ದಾರೆ.
ತಮ್ಮಅನುವಾದಿತ ಕೃತಿ‘ಬ್ರೈಡ್ಇನ್ದಿಹಿಲ್ಸ್’ ಬಗ್ಗೆನಾನುಗೌರಿ.ಕಾಂಜೊತೆಗೆಮಾತನಾಡಿದ ವನಮಾಲ ಅವರು, ”ಕನ್ನಡ ಕಾದಂಬರಿಲೋಕದ ಉತ್ತುಂಗ ಶಿಖರ ಎನಿಸಿಕೊಂಡಿರುವ ‘ಮಲೆಗಲಲ್ಲಿಮದುಮಗಳು’ ಕೃತಿಯನ್ನುಸುಮಾರು30 ವರ್ಷಗಳ ಹಿಂದೆಮೊದಲ ಬಾರಿಗೆಓದಿದಾಗಲೆಅದರ ಆಳ ಅಗಲಗಳನ್ನುನೋಡಿದಂಗಾಗಿಬಿಟ್ಟಿದ್ದೆ. ಕಾದಂಬರಿಯ ವಿಸ್ತಾವರವಾದ ಬಿತ್ತಿಯಾವುದನ್ನೂಯಾರನ್ನೂಬಿಡದೆಒಳಗೊಳ್ಳುವ ರೀತಿಕೆವಿಸುಬ್ಬಣ್ಣಅವರುಹೇಳಿದಂತೆ‘ಮಲೆನಾಡ ಮಹಾಭಾರತ’ ಎನ್ನಿಸುವಂತಹ ಸಂಕೀರ್ಣತೆನಮ್ಮಮುಂದೆಚೈತನ್ಯದಿಂದಮಿಡಿಯುತ್ತಿರುವ ಬದುಕನ್ನೆಅನಾವರಣ ಮಾಡುತ್ತವೆ. ಇಂತಹ ಮಹಾನ್ಕೃತಿಯನ್ನುಅನುವಾದ ಮಾಡಬಹುದು, ನಾನೇಮಾಡಿದರೂಮಾಡಬಹುದುಎಂಬ ಕನಸುಕೂಡಾಆಗ ಇರಲಿಲ್ಲ” ಎಂದುಹೇಳಿದರು.
ಅದಾಗ್ಯೂ, 2017 ರಲ್ಲಿ ಹಾರ್ವರ್ಡ್ಯುನಿವರ್ಸಿಟಿ ಪ್ರೆಸ್ಗೆ ‘ಹರಿಶ್ಚಂದ್ರಕಾವ್ಯ’ವನ್ನು, 2019ರಲ್ಲಿ ಆಕ್ಸ್ಫರ್ಡ್ಯುನಿವರ್ಸಿಟಿ ಪ್ರೆಸ್ಗೆ ‘ಇಂದಿರಾಬಾಯಿ’ ಯಂತಹ ಬಹುಭಾಷೆಗಳನ್ನು ಬಳಸಿರುವ ಕೃತಿಯನ್ನು ಇಂಗ್ಲಿಷ್ಗೆ ಅನುವಾದ ಮಾಡಿದ ನಂತರ ಈ ಸಾಹಸಕ್ಕೆ ಕೈಹಾಕುವ ಧೈರ್ಯ ಬಂತು ಎಂದು ವನಮಾಲ ನಾನು ಗೌರಿ.ಕಾಂ ಗೆ ಹೇಳಿದರು.
“ಇಂತಹ ಕಷ್ಟ ಸಾಧ್ಯ ವಾದ ಕೃತಿಯನ್ನು ಅನುವಾದ ಮಾಡುವುದು ಒಂದು ಮಾತಾದರೆ, ಅದನ್ನು ಕನ್ನಡೇತರರಿಗೆ ದೊರಕುವಂತೆ ಮಾಡುವುದು ಬೇರೆಯದೆ ಮಾತು. ಹೀಗಾಗಿ Penguin Random House India ನಂತಹ ಪ್ರತಿಷ್ಠಿತ ಸಂಸ್ಥೆಕೃತಿ ಅನುವಾದ ಪ್ರಕಟಿಸಲು ಮುಂದಾದಾಗ ನನಗೆ ಈ ಹಿಮಾಲಯವನ್ನು ಏರುವುದಕ್ಕೆ ಬೇಕಾದ ಶಕ್ತಿ ಮತ್ತು ಹುರುಪು ಬಂತು” ಎಂದು ತಿಳಿಸಿದರು. ನಮ್ಮಅರಿವನ್ನು ಹಿಗ್ಗಿಸಿ ನಮ್ಮ ವರ್ಣ ವರ್ಗಗಳ ಮಿತಿಗಳನ್ನು ವಿಸ್ತರಿಸಿ, ನಮ್ಮಅಸ್ಮಿತೆಗಳ ಎಲ್ಲೆಗಳ ಮಾರುವಂತೆ ನಮ್ಮನ್ನು ಬೆಳೆಸುವ ‘ಎಪಿಕ್ನೋವೆಲ್’ ಇದು. ಇಂತಹ ಮೇರುಕೃತಿಯನ್ನುಅನುವಾದ ಮಾಡುವ ಅವಕಾಶ, ಸವಾಲು, ಸಂತೋಷ ನನ್ನಗಾಗಿದ್ದು, ಇದಕ್ಕಾಗಿ, ನಾನು ಚಿರಋಣಿ ಎಂದು ವನಮಾಲ ಹೇಳಿದರು.
